ಕೊಬ್ಬರಿ ಎಣ್ಣೆಯ ಪ್ರಯೋಜನಗಳು
ಕೊಬ್ಬರಿ ಎಣ್ಣೆಯ ಪ್ರಯೋಜನಗಳು
ಕೊಬ್ಬರಿ ಎಣ್ಣೆಯನ್ನು ತ್ವಚೆಗೆ ಹಚ್ಚಿಕೊಳ್ಳುವುದರಿಂದ ಸೂರ್ಯನ UV Ray ಕಿರಣಗಳಿಂದ ರಕ್ಷಿಸುತ್ತದೆ. ಚರ್ಮಕ್ಕೆ ತೆಂಗಿನ ಎಣ್ಣೆಯ ಮತ್ತೊಂದು ಪ್ರಯೋಜನವೆಂದರೆ ಅದು ಉತ್ಕರ್ಷಣ ನಿರೋಧಕ ಸ್ಥಿತಿಯನ್ನು ಸುಧಾರಿಸುವ ಮೂಲಕ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ತೆಂಗಿನ ಎಣ್ಣೆಯು ಚರ್ಮದ ಕಪ್ಪು ಕಲೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಕೊಬ್ಬರಿ ಎಣ್ಣೆಯನ್ನು ನಿಮ್ಮ ಮೇಕಪ್ ತೆಗೆಯಲು ಕೂಡ ಬಳಸಬಹುದು. ಹಾಗೇ, ಲಿಪ್ ಬಾಮ್ ರೀತಿಯಲ್ಲೂ ಬಳಸಬಹುದು.
ಕೊಬ್ಬರಿ ಎಣ್ಣೆಯನ್ನು ಒಗ್ಗರಣೆ ಅಥವಾ ಇನ್ನಾವುದೇ ರೂಪದಲ್ಲಿ ಸೇವಿಸುವುದರಿಂದ ಮೆದುಳಿನ ಕ್ಷಮತೆ ಹೆಚ್ಚಿಸಲು ಹೆಚ್ಚು ಪ್ರಭಾವ ಶಾಲಿಯಾಗಿದೆ ಎಂಬುದನ್ನು ಕೆಲವಾರು ಅಧ್ಯಯನಗಳಿಂದ ಕಂಡುಕೊಳ್ಳಲಾಗಿದೆ ಮತ್ತು ಇದರಲ್ಲಿ ಸುಮಾರು 84 ಶೇಖಡಾ ಪರ್ಯಾಪ್ತ ಕೊಬ್ಬು ಇರುವುದರಿಂದ ಈ ಕೊಬ್ಬು ಹೃದಯದ ಕ್ಷಮತೆ ಹೆಚ್ಚಿಸುತ್ತದೆ ಹಾಗೂ ಹೃದಯಸಂಬಂಧಿ ಕಾಯಿಲೆಗಳಿಂದ ರಕ್ಷಿಸುತ್ತದೆ.
ಕೊಬ್ಬರಿ ಎಣ್ಣೆಯನ್ನು ಚಿಕ್ಕ-ಪುಟ್ಟ ಬಿದ್ದ ಗಾಯಗಳು, ತರಚು ಗಾಯ, ಸುಟ್ಟ ಗಾಯ, ಹರಿತ ಸಾಧನದಿಂದ ಆದ ಗಾಯ ಮತ್ತು ಕೀಟಕಡಿತ, ಸೊಳ್ಳೆ ಕಡಿತಕ್ಕೂ ಕೊಬ್ಬರಿ ಎಣ್ಣೆಯನ್ನುಹಚ್ಚಿಕೊಳ್ಳಬಹುದು.